ಪ್ಲೆಕ್ಟೋನ್ಯಾತಿ
	ಅತಿ ವಿಚಿತ್ರ ಮತ್ತು ವೈಶಿಷ್ಟಪೂರ್ಣ ಮೀನುಗಳಾದ ಫೂಲಮೀನು, ಟ್ರಂಕ್‍ಮೀನು, ಪಫ್ಟರ್‍ಮೀನು, ಪಾರ್ಕ್ಯುಪೈನ್ ಮೀನು ಮತ್ತು ಹೆಡ್‍ಮೀನುಗಳನ್ನು ಒಳಗೊಂಡಿರುವ ಮತ್ಸ್ಯಕುಟುಂಬ ಬಲು ನಿಧಾನಗತಿಯಲ್ಲಿ ಚಲಿಸುವ ಮೀನುಗಳಿವು. ಇವುಗಳ ಕಿವಿರಿನ ರಂಧ್ರಗಳು ಬಹಳ ಕಿರಿಗಾತ್ರದವು. ದೇಹದ ಹೊರ ಹೊದಿಕೆ ಎಲುಬು ತಟ್ಟೆಗಳಿಂದ, ಮುಳ್ಳುಗಳಿಂದ ಅಥವಾ ಹುರುಪೆಗಳಿಂದ ರಚಿತವಾಗಿದೆ. ಕೆಲವೊಮ್ಮೆ ಮೃದುವಾಗಿರಬಹುದು. ದವಡೆಗಳು ಮೊಟಕಾಗಿಯೂ ಗಟ್ಟಿಯಾಗಿಯೂ ಇವೆ. ದೇಹದ ಬಣ್ಣ ವೈವಿಧ್ಯಪೂರ್ಣ ಹಾಗೂ ಆಕರ್ಷಕ. ಈ ಮೀನುಗಳು ಉಷ್ಣ ಮತ್ತು ಸಮಶೀತೋಷ್ಣವಲಯಗಳ ಸಮುದ್ರಗಳಲ್ಲಿ ಜೀವಿಸುವುವು. 	
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ